ಬಸವಣ್ಣ - Basavanna

Community

ಇಷ್ಟ ಲಿಂಗದ ಜನಕರು ಮತ್ತು ಬಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು.


ಶ್ರೀ ಬಸವೇಶ್ವರ (ಶ್ರೀ ಬಸವ ಅಥವಾ ಬಸವಣ್ಣನವರು) ಶರಣ ಶರಣೆಯರ ಲಿಂಗಾಯತ ಧರ್ಮದ ಪ್ರತಿಪಾದಕರು. ಬಸವಣ್ಣನವರು ೧೨ ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. ಬಸವಣ್ಣನವರು ಮತ್ತು ಶರಣ ಶರಣೆಯರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ ವೊದಲಾದ ನೂರಾರು ಶರಣ ಶರಣೆಯರು ವಚನಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿ ಬೀರಿದರು.

ಬಸವಣ್ಣನವರು ೧೧೩೪ ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ (ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು ಎಂಬ ಪ್ರತೀತಿ ಇದೆ.), ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದರು. ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆಗಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದರು. ಅವರ ೮ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಬಸವಣ್ಣನವರಿಗೆ ಜನಿವಾರ ಹಾಕಲು ಬಂದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಕೊಡಲು ಕೇಳುತ್ತಾನೆ, ಆಗ ಇದು ಪುರುಷರಿಗೆ ಮಾತ್ರ ಕೊಡುವಂತಹುದು ಆದ್ದರಿಂದ ಅಕ್ಕನಿಗೆ ಕೊಡಲು ಬರುವುದಿಲ್ಲ ಅಂತ ನುಡಿದಾಗ, ಬಸವಣ್ಣ ಪುರುಷ/ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ.

0:16
ಬಸವ ಭಾಂದವರಿಗೆ ಲೋಕೇಶ್ ಕೊರವಿ ಮಾಡುವ ಶರಣು ಶರಣಾರ್ಥಿ. ದೆಹಲಿ ಯಲ್ಲಿ ಮುಕ್ತಾಯವಾದ ಲಿಂಗಾಯತ ಪ್ರತಿಭಟನೆಯು ದೆಹಲಿಯಲ್ಲಿ ಸರಕಾರದ ಗಮನ ಸೆಳೆಯಲು ಸ್ವಲ್ಪ ಮಟ್ಟಿಗೆ ಯಶಸ್ವಿ ಯಾಗಿದೆ ಅಂತ ಹೇಳಬಹುದು. ಕಡೆಯ ದಿನವಾದ ಇಂದು 12ನೆ ಡಿಸೆಂಬರ್ 2018, ಮುಂಜಾನೆ 10.30 ಗಂಟೆಗೆ ದೆಹಲಿಯ ಅಂಬೇಡ್ಕರ್ ಭವನದಿಂದ ಶುರುವಾದ ಪಾದಯಾತ್ರೆ, ಜಂತರ್ ಮಂಟರ್ ರಸ್ತೆ ವರಿಗೂ, ಸಾಕಷ್ಟು ಟ್ರಾಫಿಕ್ ಜಾಮ್ ಮಾಡುತ್ತಾ ನಡಿ ಯಿತು. ಬಸವಘೋಷಣೆ ಮಾಡುತ್ತ ಹೊರಟ ಬಸವ ಧರ್ಮಿಯರು ಸಾವಿರಾರು ಶರಣ, ಶರಣೆಯರು ಪೊಲೀಸ್ ಸರ್ಪಗಾವಲಿನಿಂದ ಪಾರ್ಲಿಅಮೆಂಟ್ ಹೋಗಲು ಆಗದೆ, ಮೊದಲೇ ನಿಗದಿ ಅದ ಜಂತರಮಂತರ್ ರೋಡ್ ದಲ್ಲಿ ಸಭೆ ಯಾಗಿ ಮಾರ್ಪಟ್ಟಿತು. ಪೊಲೀಸರು ಸಭೆಯ ಯರಡು ಕಡೆ ತಡೆಗೋಡೆ ಕಟ್ಟಿ. ಪಾರ್ಲಿಅಮೆಂಟ್ ಕಡೆ ಹೋಗಲು ತಡೆ ಒಡ್ಡಿದರು, ತಡೆಗೋಡೆ ಭೇದಿಸಲು ಹೋದ ಬಸವಪ್ರಭು ಸ್ವಾಮೀಜಿ, ಸತ್ಯದೇವಿ ಮಾತಾಜಿಗೆ ಪೊಲೀಸ್ ಅಧಿಕಾರಿ ಲಾಠಿ ಚಾರ್ಜ್ ಮಾಡಿದ್ದಾರೆ. ಸ್ವಲ್ಪ ಪೆಟ್ಟಾಗಿದೆ. ಸಭೆಗೆ ಪ್ರಧಾನ ಮಂತ್ರಿಗಳು ಅಥವಾ ಕೇಂದ್ರ ಸರಕಾರದ ಗ್ರಹ ಮಂತ್ರಿಗಳೆ ಬಂದು ನಮ್ಮ ಮನವಿ ತೆಗೆದುಕೊಳ್ಳಬೇಕೆಂದು ಮಾತಾಜಿಯವರ ಒತ್ತಾಯವಿದ್ದುದ್ದರಿಂದ, ಪೊಲೀಸ್ ಅಧಿಕಾರಿ ನಮ್ಮ ಕೆಲುವು ಪ್ರತಿನಿಧಿಗಳನ್ನು ಅಲ್ಪ ಸಂಖ್ಯಾತ ಮಂತ್ರಗಳಾದ ನಕ್ವಿ ಯವರನ್ನು ಭೇಟಿ ಮಾಡಿಸಿ, ಅವರು ಹೊರದೇಶಕ್ಕೆ ಹೋಗುತ್ತಿರುವದರಿಂದ, ಅವರು ತಮ್ಮ ಸಹಾಯಕರನ್ನು ವೇದಿಕೆಗೆ ಕಳಿಸಿ, ಮನವಿಯನ್ನು ಮಾತಾಜಿಯವರಿಂದ ತೆಗೆದುಕೊಂಡಿದ್ದಾರೆ. ಇದೆ ಅಧಿವೇಶನದಲ್ಲಿ ಅದರ ಬಗ್ಗೆ ಚರ್ಚಿಸಲು ಪ್ರಯತ್ನಿಸುವದಾಗಿ ಹೇಳಿದ್ದಾರೆ. ಪೊಲೀಸ್ ಅಧಿಕಾರಿ ಲಾಠಿ ಚಾರ್ಜ್ ಮಾಡಿದ ಬಗ್ಗೆ ಮಾತಾಜಿ ಯವರಲ್ಲಿ ಕ್ಷಮೆ ಕೇಳಿದ್ದಾರೆ. ಪೂಜ್ಯ ಜಗದ್ಗುರು dr ಮಾತೆ ಮಹಾದೇವಿಯವರು ದೇಹಲಿಯಲ್ಲಿಯೇ ಎಂಟು ದಿನ ಇದ್ದು ಪ್ರಧಾನ ಮಂತ್ರಿಗಳು, ಗ್ರಹಮಂತ್ರಿಗಳನ್ನು ಭೇಟಿ ಯಾಗಿ ಮಾತನಾಡಿ ನಂತರ ಕರ್ನಾಟಕಕ್ಕೆ ಬರುವದಾಗಿ ತಿಳಿಸಿದ್ದಾರೆ. ಈ ದೆಹಲಿಯ ಯಾತ್ರೆ ಲಿಂಗಾಯತರ ಹೋರಾಟಕ್ಕೆ ಬಲ ತುಂಬಿದೆ, ನಮ್ಮ ಹೋರಾಟ ಇನ್ನು ಮುಂದೆ ಇನ್ನು ದೊಡ್ಡ ಪ್ರಮಾಣದಲ್ಲಿ ನಡಿಯುತ್ತೆ. ಈ ಹೋರಾಟ ದೆಹಲಿಯ ಗಮನ ಸೆಳಿದಿದೆ. ನಮಗೆ ಜಯ ಸಿಕ್ಕೇ ಸಿಗುತ್ತೆ, ಇವತಿಲ್ಲ ನಾಳೆ.... ಜೈ ಬಸವೇಶ, ಜೈ ಲಿಂಗಾಯತ.
4 months ago
2:22
ಡಿಸೆಂಬರ 10,11,12 ರಂದು ದೆಹಲಿಯಲ್ಲಿ ನಡೆಯುವ ಲಿಂಗಾಯತ ಸ್ವತಂತ್ರ ಧರ್ಮ ಬೃಹತ್ ಸಮಾವೇಶಕ್ಕೆ ಬೆಳಗಾವಿ ಜಿಲ್ಲಾ ಹುಕ್ಕೇರಿ ತಾಲುಕಿನ ಯರಗಟ್ಟಿ ಗ್ರಾಮದ ರಾಷ್ಟೀಯ ಬಸವ ಸೇನೆ ಸದ್ಯಸ ರವಿ ಚೌಗಲಾ ಅವರು ಬೆಳಗಾವಿಯಿಂದ ದೆಹಲಿ ವರೆಗೆ 1700 ಕಿ ಮಿ ಸೈಕಲ್ ಮೇಲೆ ಪ್ರಯಾಣ ಬೆಳಸಿ ಅಲ್ಲಿ ಸಮಾವೇಶದಲ್ಲಿ ಭಾಗಿಯಾಗುವರು. ಇವರಿಗೆ ರಾಷ್ಟ್ರೀಯ ಬಸವದಳ ಗುರು ಬಸವ ಮಂಟಪದಲ್ಲಿ ಎಲ್ಲಾ ಲಿಂಗಾಯತ ಸಮಾಜದವರು ಸತ್ಕರಿಸಿ ಹಾರೈಸಿ ಮಾಹಂತೇಶ ನಗರ ಕಣಬರ್ಗಿ ರಸ್ತೆಯಿಂದ ಚಾಲನೆಯನ್ನು ನೀಡಿದ್ದರು. ರಾಷ್ಟ್ರೀಯ ಬಸವದಳ ಅಧ್ಯಕ್ಷರಾದ ಕೆ ಬಸವರಾಜ,ಆನಂದ ಗುಡಸ ಕೆ ಶರಣರ ಪ್ರಸಾದ ಜಾಗತಿಕ ಲಿಂಗಾಯತ ಮಹಾಸಭೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಅರವಿಂದ ಪೌರಶೆಟ್ಟಿ ಕಾಶಪ್ಪಾ ಉಪ್ಪಿನ ಮತ್ತು ರಾಷ್ಟ್ರೀಯ ಬಸವಸೇನೆ ಬೆಳಾಗವಿ ಜಿಲ್ಲಾ ಘಟಕ ಅಧ್ಯಕ್ಷ ಶಂಕರ ಗುಡಸ ರಾಜು ಪದಮ್ಮನ್ನವರ ಸಂಜಯ ಭಾಂವಿ ಸತೀಶ ಚೌಗಲ ಶಿವಾನಂದ ವಾರವಾಡಿ ಪ್ರಭು ಪಾಟೀಲ ಮಲಗೌಡ ಪಾಟೀಲ. ಅವರು ಉಪಸ್ಥಿತಿಯಲ್ಲಿ ಇದ್ದರು. ಶರಣು ಶರಣಾರ್ಥಿಗಳು.
5 months ago