Beauty of Tulunad

Regional Website

A page to experience Tulu Nadu in all aspects.


A page to experience Tulu Nadu in all aspects.

2:08
ಕಟೀಲು ದುರ್ಗಾರ್ಪರಮೇಶ್ವರಿ ಜಾತ್ರಾ ಮಹೋತ್ಸವ ಇತಿಹಾಸ ಪ್ರಸಿದ್ಧ ಕಟೀಲು ದುರ್ಗಾರ್ಪರಮೇಶ್ವರಿ ದೇವಳದಲ್ಲಿ ವರ್ಷಂಪ್ರತಿ ನಡೆಯುವ ಜಾತ್ರಾ ಮಹೋತ್ಸವದ ವೇಳೆ ನಡೆಯುವ ತೂಟೆದಾರ(ತಾಳೆಯ ಗರಿಯನ್ನು ಸುತ್ತಿ ಬೆಂಕಿಯನ್ನು ಹೊತ್ತಿಸಿ ಅದನ್ನು ಭಕ್ತರು ಒಬ್ಬರ ಮೇಲೊಬ್ಬರು ಎಸೆಯುವುದು) ತುಳುನಾಡಿನ ಪರಂಪರೆ, ಅಸುರ ಅರುಣಾಸುರನನ್ನು ಸಂಹರಿಸಿದ ದೇವಿ ವಿಜಯಿಯಾಗಿ ಬರುವ ವೇಳೆ ಈ ರೀತಿ ಬೆಂಕಿಯಿಂದ ಸ್ವಾಗತ ಕೋರುವುದು ಎಂಬ ಪ್ರತೀತಿಯೂ ಇದೆ. (Follow Beauty of Tulunad page) ಇತಿಹಾಸದಲ್ಲಿ ಪ್ರಾಚೀನ ಕಾಲದಿಂದಲೂ ನಡೆದು ಬಂದಿರುವ ವಿಶೇಷವಾದ ನಂಬಿಕೆ ಹಾಗೂ ಆಚರಣೆ. ಈ ವೇಳೆ ಭಕ್ತರು ಮೈಮೇಲೆ ಕೇವಲ ಶಾಲು ಹಾಗೂ ಧೋತಿಯನ್ನು ಮಾತ್ರ ತೊಟ್ಟುಕೊಂಡಿರುತ್ತಾರೆ, ಹಾಗಿದ್ದೂ ನಾನು ಗಮನಿಸಿದಂತೆ ಇಲ್ಲಿಯ ತನಕ ತೋಟೆದಾರಗದಲ್ಲಿ ಬೆಂಕಿ ಅನಾಹುತ, ಭಕ್ತಾದಿಗಳ ಮೈಮೇಲೆ ಗಾಯಗಳುಂಟಾದ ಉದಾಹರಣೆಗಳಿಲ್ಲ. ಈ ವೈಶಿಷ್ಟ್ಯಪೂರ್ಣ ಆಚರಣೆಯಲ್ಲಿ ಪಾಲ್ಗೊಳ್ಳಲು ನಡುರಾತ್ರಿಯ ವೇಳೆ ಸಾವಿರಾರು ಸಂಖ್ಯೆಯ ಭಕ್ತರು ನೆರೆಯುತ್ತಾರೆ. ಕಟೀಲು ಮಾತೆಯ ಸನ್ನಿಧಿಯಲ್ಲಿ ಪಾವನರಾಗುತ್ತಾರೆ. (Follow Beauty of Tulunad page) ...spb...
12 hours ago
2:53
ಕುಂಬಳೆಯ ಹಿಂದೂ-ಮುಸ್ಲಿಂರ ಭಾವೈಕ್ಯ ಬೆಸೆಯುವ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಜನರಲ್ಲಿರುವ ಭಕ್ತಿಯ ಪರಾಕಾಷ್ಟೆ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಕುಂಬಳೆಯ ಅರಿಕ್ಕಾಡಿನಲ್ಲಿನ ಭಗವತಿ, ಅಲಿ, ಚಾಮುಂಡಿ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಧಾರ್ಮಿಕ ನಂಬಿಕೆ ಹಾಗೂ ಪ್ರಸಿದ್ಧಿ ಪಡೆದಿರುವ ಭೂತಾರಾಧನೆಯನ್ನು ನಡೆಸಲಾಗುತ್ತಿದೆ. ಮಹೋತ್ಸವದಲ್ಲಿ ಅಲಿ ಭೂತ ಮತ್ತು ಚಾಮುಂಡಿ ಭೂತ ಎಂಬ ಎರಡು ಶಕ್ತಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಂಡಾಮಾನ್ ಮತ್ತು ನಿಕೋಬಾರ್ ನಿಂದ ಸುಮಾರು 40 ಕಿ.ಮೀ ದೂರದಿಂದ ಅಲಿ ಭೂತವನ್ನು ಕುಂಬಳೆಯ ಅರಿಕ್ಕಾಡು ಪ್ರದೇಶಕ್ಕೆ ಕರೆತರಲಾಗುತ್ತದೆ. (Follow Beauty of Tulunad page) ಅಲಿ ಭೂತಕ್ಕೆ ಹಿನ್ನೆಲೆ ಕಥೆಯೊಂದಿದ್ದು, ವ್ಯಾಪಾರಿಯೊಬ್ಬರು ಆ ಕಥೆಯನ್ನು ವಿವರಿಸಿದ್ದಾರೆ. ಅಲಿ ಮಾಟಮಂತ್ರ ಪ್ರವೀಣವೆಂದೇ ಹೇಳಲಾಗುತ್ತದೆ. ಕಾಮದಿಂದ ಮಹಿಳೆಯನ್ನು ನೋಡಿದ್ದ ಅಲಿ ಮಹಿಳೆಯನ್ನು ಓಡಿಸಿಕೊಂಡು ಬರುತ್ತಿರುತ್ತದೆ. ಈ ವೇಳೆ ಗ್ರಾಮಸ್ಥರು ಅಲಿಯಿಂದ ಮಹಿಳೆಯನ್ನು ರಕ್ಷಿಸುವಂತೆ ತಾಯಿ ಭಗವತಿ ಬಳಿ ಕೇಳಿಕೊಳ್ಳುತ್ತಾರೆ. ಅಲಿ ಭೂತಕ್ಕೆ ಸಾಕಷ್ಟು ಶಕ್ತಿಯಿದ್ದು, ತಲಿಸ್ಮನ್ ಎಂಬ ವಸ್ತ್ರಾ ಕವಚವನ್ನು ತೊಟ್ಟಿರುತ್ತಾನೆ. ಆ ಕವಚದ ಪರಿಣಾಮ ಆತನನ್ನು ಯಾರು ಹಿಮ್ಮೆಟ್ಟಿಸಲು ಸಾಧ್ಯವಾಗುವುದಿಲ್ಲ. (Follow Beauty of Tulunad page) ಅಲಿಯಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ಮಹಿಳೆಯನ್ನು ತಾಯಿ ಭಗವತಿಯೆಂದೇ ಹೇಳಲಾಗುತ್ತದೆ. ಅಲಿ ವಸ್ತ್ರಾ ಕವಚದ ರಹಸ್ಯ ತಾಯಿ ಭಗವತಿಗೆ ತಿಳಿದಿತ್ತು. ಇದರಂತೆ ತಪ್ಪಿಸಿಕೊಂಡು ಓಡಿಹೋದ ಭಗವತಿ ಚತ್ರಾಂಪಲ್ಲಾ ಕೊಳದಲ್ಲಿ ಸ್ನಾನಕ್ಕೆ ಕುಳಿತು ಬಿಡುತ್ತಾಳೆ. ನಂತರ ಭಗವತಿಯನ್ನು ಕೊಳದಿಂದ ಎಳೆದು ಹೊರಕ್ಕೆ ತರಲು ಅಲಿ ಯತ್ನಿಸುತ್ತಾನೆ. ಈ ವೇಳೆ ಭಗವತಿ, ಅಲಿ ಕೊಳದೊಳಗೆ ಬರಲು ಅನುಮತಿ ನೀಡುತ್ತಾಳೆ. ಭಗವತಿಯ ಉಪಾಯವನ್ನು ಅರಿಯದ ಅಲಿ ಕೊಳೆದಲ್ಲಿ ಇಳಿಯುವ ಸಲುವಾಗಿ ತಾನು ತೊಟ್ಟಿದ್ದ ರಕ್ಷಾ ಶಕ್ತಿ ಕವಚವನ್ನು ಬಿಟ್ಟಿ ಕೊಳದಲ್ಲಿ ಇಳಿಯುತ್ತಾನೆ. ನಂತರ ಚಾಮುಂಡಿ ಅವತಾರ ತಾಳುವ ಭಗವತಿ, ಅಲಿ ಮಾಡಿದ ಅನ್ಯಾಯ, ತಪ್ಪುಗಳ ಅರಿವು ಆತನಿಗೆ ಆಗುವಂತೆ ಮಾಡುತ್ತಾಳೆ. ನಂತರ ಕ್ಷಮೆಯಾಚುವ ಅಲಿ ತನ್ನ ಭಕ್ತನಾಗಿ ಮಾಡಿಕೊಳ್ಳುವಂತೆ ದೇವಿ ಬಳಿ ಮನವಿ ಮಾಡಿಕೊಳ್ಳುತ್ತಾನೆ. ಅಂತಿಮವಾಗಿ ಅಲಿಯನ್ನು ಬಲಿ ಪಡೆಯುತ್ತಾಳೆ. (Follow Beauty of Tulunad page) ಹಲವು ವರ್ಷಗಳಿಂದ ಮಕ್ಕಳಿಲ್ಲದೆ ಕೊರಗುತ್ತಿದ್ದ ದಂಪತಿಗಳಿಗೆ ಅಶ್ಚರ್ಯವೆಂಬಂತೆ ಇದೀಗ ಮಕ್ಕಳಾಗಿದೆ. ಇದಕ್ಕೆ ಪ್ರತಿಯಾಗಿ ಆ ದಂಪತಿಗಳು ಅಲಿಭೂತಕ್ಕೆ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ನೀಡಿದ್ದಾರೆಂದು ವ್ಯಾಪಾರಸ್ಥ ಮಹೋತ್ಸವ ಹಾಗೂ ಅಲಿಭೂತದ ಹಿನ್ನೆಲೆಯ ವಿವರಣೆಯನ್ನು ನೀಡಿದ್ದಾರೆ. (Follow Beauty of Tulunad page) Special thanks to Prithviraj Shetty Kumble © ...spb...
11 days ago
4:19
TULU NADU
16 days ago
1:48
ಶ್ರೀ ಅರಸು ಕುಂಜಿರಾಯ ದೈವವನ್ನು ನಮಗೆ ನಿಖರವಾಗಿ ಪಾಡ್ಡನ ಸಿಗದಿದ್ದರೂ ಹಿರಿಯರಿಂದ ಅರಸು ಕುಂಜಿರಾಯರ ಬಗ್ಗೆ ತಿಳಿದಿದ್ದು ಹೀಗೆ : ಬಡಗಣ ರಾಜ್ಯದಿಂದ ತೆಂಕಣ ರಾಜ್ಯಕ್ಕೆ ದೈವಗಳು ಕಡಲ ಸ್ನಾನ ಮಾಡಲು ಬಂದವು. ಹೀಗೆ ಬಂದವರಲ್ಲಿ ಅರಸುಕುಂಜಿರಾಯರು ಒಬ್ಬರು. ಐಕಳ ಭಾವಕ್ಕೆ ಬಂದು ಅಲ್ಲಿನ ಪ್ರಶಾಂತವಾದ ಸ್ಥಳಕ್ಕೆ ಭೇಟಿಕೊಟ್ಟಾಗ ಅಲ್ಲಿನ ಜಲಕೊರತಿ ಬಂದು ತಡೆಯುತ್ತಾಳೆ . " ನೀವು ಈ ರಾಜ್ಯಕ್ಕೆ ಬಂದರೆ ನಮಗೆ ಸಿಕ್ಕುವ ಸ್ಥಾನಮಾನಗಳು ದಕ್ಕುವುದಿಲ್ಲ, ನೀವು ಇಲ್ಲಿಂದ ಹೋಗಿ ". " ನಾನು ಇಲ್ಲಿಂದ ಹೋಗಲು ಬಂದವನಲ್ಲ. ನನಗೆ ತೆಂಕಣ ರಾಜ್ಯ ಸ್ನಾನ ಮಾಡಲೇ ಬೇಕು ಎಂದರು ಕುಂಜಿರಾಯರು. ಮಾತಿಗೆ ಮಾತು ಎಳೆದು ಜಗಳ ಪ್ರಾರಂಭವಾಯಿತು. ಅಲ್ಲಿಗೆ ಅಡ್ಯನಗುತ್ತು ಅಡ್ಯಂತಾಯ ಬಂದು ಶಾಂತಿ ಪ್ರಿಯ ಕುಂಜಿರಾಯರನ್ನು ಉದ್ದೇಶಿಸಿ ಹಾಗು ಜಾಲಕೊರತಿಯಲ್ಲಿ " ಇವರು ಶಾಂತ ಮೂರ್ತಿ, ನಿಮ್ಮೊಳಗೆ ಜಗಳ ಯಾಕೆ ಅವರಿಗೆ ಬೇಕಾದ ಜಾಗ ಅವರು ಆಯ್ಕೆ ಮಾಡಿಕೊಳ್ಳಲಿ, ಯಾವುದಾದರೂ ಎರಡು ಕ್ಷೇತ್ರದಲ್ಲಿ ನೆಲೆ ನಿಲ್ಲಲಿ" ಎಂದ. ಸರಿ ಎಂದು ಇಬ್ಬರೂ ಒಪ್ಪ್ಪಿದರು. ಕಟೀಲು ಕ್ಷೇತ್ರದ ಸಮೀಪವಿರುವ ಕೊಡೆತ್ತೂರಿನ ತಂದೊಳಿಗೆ ಪಾಡಿಯಲ್ಲಿ ನೆಲೆ ನಿಂತರು. ಅಲ್ಲಿಂದ ಬಂದವರು ಅತ್ತೂರು ಬ್ರಹ್ಮರ ಕಟ್ಟಿ ನಂದಲದ ಗೋಳಿಡದಿಯಲ್ಲಿ ಬಂದರು. (Follow Beauty of Tulunad facebook page) ಗಂಗಾಸ್ನಾನ ಮಾಡಿ ಅಲ್ಲಿ ನಿಂತಿದ್ದ ಜಾರಂದಾಯ, ಸರಳ ಧೂಮಾವತಿ, ಕೊಡಮಣಿತ್ತಾಯ ಕಾಂತೇರಿ ಧೂಮಾವತಿ ದೈವಗಳಲ್ಲಿ ನೀವು ಬೇರೆ ಬೇರೆ ಕಡೆಗಳಲ್ಲಿ ನೆಲೆ ನಿಲ್ಲಿ ವರ್ಷಕ್ಕೊಂದು ಸಲ ಭೇಟಿಯಾಗುವ. ಜಾರಂದಾಯ ನೀನು ಚೇಳಾರು ಗುಡ್ಡೆ (ಈಗಿನ ಪಂಜ ಹರಿಪಾದೆ) ಯಲ್ಲಿ, ಸರಳ ಧೂಮಾವತಿ ಕಿಲೆಂಜೂರಿನಲ್ಲಿ, ಕೊಡಮಣಿತ್ತಾಯ ಶಿಬರೂರಿನಲ್ಲಿ, ಕಾಂತೇರಿ ಧೂಮಾವತಿ ಮೂಡ್ರಗುತ್ತಿನಲ್ಲಿ ನೆಲೆಯಾಗಿ. ನಾನು ನನಗೆ ಬೇಕಾದ ಜಾಗವನ್ನು ಆರಿಸಿಕೊಳ್ಳುತ್ತೇನೆ. ನಮ್ಮ ಈ ಭೇಟಿ ಪ್ರತಿ ವರ್ಷ ಆಗುತ್ತಲೇ ಇರುತ್ತದೆ ಎಂದ ಕುಂಜಿರಾಯರು ಅಲ್ಲಿಂದ ಹೊರಟು ಸಣ್ಣ ಕುಕ್ಕು ಗೋಲಿ ಮರದ ಕಟ್ಟೆಯಲ್ಲಿ ನೆಲೆ ನಿಂತರು. ಅಡ್ಯಂತಾಯ ಅಲ್ಲೇ ಸಮೀಪದ ಪಡುಮನೆಯಲ್ಲಿ ನೆಲೆನಿಂತರು. ತನ್ನ ಕಾರಣೀಕವನ್ನು ಮೆರೆದು ಊರವರಿಂದ ಸ್ಥಾನ ಕಟ್ಟಿಸಿಕೊಂಡು ತಮ್ಮ ಭಂಡಾರವನ್ನು ಭಂಡಾರ ಮನೆಯಲ್ಲಿ ಇರಿಸುವಂತೆ ಅರಸು ಕುಂಜಿರಾಯರು ತಿಳಿಸಿದರು. (Follow Beauty of Tulunad facebook page) ತನ್ನ ಪೂಜೆಯ ವೈದಿಕ ವಿಧಿವಿಧಾನವನ್ನು ಅತ್ತೂರು ಬೈಲುಡುಪರು, ದೈವದ ನಿತ್ಯ ಸೇವೆಯನ್ನು ಭಂಡಾರಮನೆಯವರು ನಡೆಸಿಕೊಂಡು ಬರಬೇಕು ಎಂದು ಅಪ್ಪಣೆ ಮಾಡಿದರು. ಕೆಲವೊಂದು ಜನರ ಪ್ರಕಾರ ದುರ್ಗಿಪೂಜಾರ್ತಿ ಎಂಬವಳು ಇದ್ದಳು. ಅವಳ ಮನೆಯಲ್ಲಿ ಮಾತ್ರ ಆವಿ ಇತ್ತು. ಇಡೀ ಊರಿನ ಅರ್ಧಕ್ಕಿಂತ ಹೆಚ್ಚಿನ ಭಾಗ ಅವಳಿಗೆ ಸೇರಲ್ಪಟ್ಟಿತ್ತು. ಮೇಲಿನ ದೈವಸ್ಥಾನಕ್ಕೆ ದುರ್ಗಿ ಪೂಜಾರಿಯಲ್ಲಿ ಕೇಳಿದಾಗ ದುರ್ಗಿ ಪೂಜಾರಿ " ನೀರನ್ನು ನಾನು ಕೊಡುತ್ತೇನೆ, ಆದರೆ ನನ್ನ ಸಂತಾನದವರಿಗೆ ಯಾವಾಗಲು ಕುಂಜಿರಾಯರ ಸ್ಥಾನದಲ್ಲಿ ಮರ್ಯಾದೆ ಸಿಗಬೇಕು". ಎಂದು ೫ ಸೀಯಾಳ, ೫ ತೆಂಗಿನಕಾಯಿ, ೫ ಸಿರಿಯನ್ನು ಕೊಟ್ಟು ಕಳುಹಿಸಿದ್ದಳು. ಅವರ ಪ್ರಕಾರವಾಗಿ ಕುಂಜಿರಾಯರ ನೇಮೋತ್ಸವದ ದಿವಸ ಮುಡಿಯನ್ನು ಹಿಡಿಯುವ ಅಧಿಕಾರ ಬಿಲ್ಲವ ಮಾನರೆತನದವರಿಗೆ ಸಲ್ಲುತಿತ್ತು. ಮುಂದೆ ಆ ಮನೆತನದವರಿಗೆ ವೈಮನಸ್ಸು ಉಂಟಾಗಿ ಕೆಳಗಿನ ದೈವಸ್ಥಾನದಲ್ಲಿ ಇಳಿದು ಹೋದರು. ಅದಕ್ಕಾಗಿ ಅವರಿಗೆ ಅಲ್ಲಿ ಅಂಗಣ ಇಳಿಯಲಿಕ್ಕಿಲ ಎಂದು ಹೇಳುತ್ತಾರೆ. ಇನ್ನು ಕೆಲವರ ಪ್ರಕಾರ ಮೇಲಿನ ದೈವಸ್ಥಾನದಲ್ಲಿ ಮೂರುದಿನ ನೆರವೇರುವ ನೇಮದ ಸಂದರ್ಭದಲ್ಲಿ ಪಡುಮನೆಯಿಂದಲೇ ನೀರು ತರಬೇಕು, ಏಕೆಂದರೆ ಅರಸು ಕುಂಜಿರಾಯರ ಅಪ್ಪಣೆಯಂತೆ ಅಡ್ಯಂತಾಯ ಬಂದು ಪಡುಮನೆಯಲ್ಲಿ ನೆಲೆನಿಂತರು. ಹಾಗು ಕುಂಜಿರಾಯರ ನೇಮದ ಸಂದರ್ಭದಲ್ಲಿ ಅಡ್ಯಂತಾಯನಿಗೆ ಮೊದಲು ಸೇವೆ ಸಲ್ಲುತ್ತದೆ ಮತ್ತು ಪ್ರಸಾದ ಪಡುಮನೆಯರಿಗೆ ಸೇರುತ್ತದೆ. (Follow Beauty of Tulunad facebook page) ವೈದಿಕ ವಿಧಿವಿಧಾನವನ್ನು ಅತ್ತೂರು ಬೈಲುಡುಪರು ನೆರವೇರಿಸಿಕೊಂಡು ಬರುತ್ತಿದ್ದರು. ಅತ್ತೂರು ಭಂಡಾರ ಮನೆಯಲ್ಲಿ ಕುಂಜಿರಾಯರಿಗೆ ನಿತ್ಯ ಪೂಜೆಯನ್ನು ಮಾಡಲು ಭಂಡಾರ ಮನೆಯಿಂದ ದೈವದ ಅಪ್ಪಣೆಯ ಮೇರೆಗೆ ಮುಕ್ಕಾಳ್ಧಿ ಪಟ್ಟವನ್ನು ಅತ್ತೂರು ಬೈಲುಮನೆಯಲ್ಲಿ ಬೈಲುಡುಪರ ಸಮ್ಮುಖದಲ್ಲಿ ನೆರವೇರಿಸುತ್ತಾರೆ. ಅವರು ಕುಂಜಿರಾಯರ ಬಾರ್ನೆ ಅತ್ತೂರು ಅತ್ತೂರು ಬೈಲು ಮನೆಯಿಂದ ಬರುತಿತ್ತು ಹಾಗು ಬರುತ್ತಲೇ ಇದೆ. ಮಾಹಿತಿ ಟೈಪ್ ಮಾಡಿದವರು ಅನೂಪ್ ಸೂರಿಂಜೆ, ಮಾಹಿತಿ : ಸ್ಮರಣ ಸಂಚಿಕೆ "ಒಲಿಮದೆ" ಶ್ರೀ ಅರಸು ಕುಂಜಿರಾಯ ದೈವಸ್ಥಾನ ಅತ್ತೂರು - ಕೆಮ್ರಾಲ್ - ಕಿಲ್ಲೆಂಜೂರು (ದಯಮಾಡಿ ಹೆಸರನ್ನು ಅಳಿಸ ಬೇಡಿ)(Follow Beauty of Tulunad facebook page) Courtesy : Beauty of Tulunad ...spb...
19 days ago
6:26
VITTAL NAYAK
20 days ago